Welcome to   
ಭಾರತೀಯಂ ಗೆ ಸ್ವಾಗತ
ನಿಮ್ಮ ಜೀವನದಲ್ಲಿ ಬಂದಿರುವ ಸಮಸ್ಯೆಗಳಿಗೆ ಹಾಗೂ ಮುಂಬರುವ ಸಮಸ್ಯೆಗಳಿಗೆ ಕಾರಣಗಳನ್ನು ತಿಳಿಸಿಕೊಟ್ಟು ಪರಿಹಾರ ಮಾರ್ಗಗಳನ್ನು ಸುಲಭ ರೀತಿಯಲ್ಲಿ ತಿಳಿಸುವ ಪ್ರಯತ್ನವು ನಮ್ಮದಾಗಿದೆ. ನಮ್ಮಲ್ಲಿನ ನುರಿತ ಜ್ಯೋತಿಷಿಗಳು ನಿಮಗೆ ಬಂದಿರುವ ಸಮಸ್ಯೆಗಳನ್ನು ಜ್ಯೋತಿಷ್ಯ ಶಾಸ್ತ್ರ , ವಾಸ್ತುಶಾಸ್ತ್ರ, ಮುಹೂರ್ತಗಳ ಸಹಾಯದೊಂದಿಗೆ ಪರಿಹರಿಸಿ ಕೊಡುತ್ತಾರೆ.
ವಾಸ್ತು
ಮಾನವನ ಜೀವನದ ನಿರ್ವಹಣೆಗಾಗಿ  ಅವಶ್ಯಕವಾದ ಮೂಲಭೂತ ವ್ಯವಸ್ಥೆಗಳಲ್ಲಿ ಮನೆಯೂ ಒಂದು. ಹಳೆಬೇರು ಹೊಸಚಿಗುರಿನಂತೆ ವೈಜ್ಞಾನಿಕ  ಪ್ರಪಂಚದಲ್ಲಿ ಪ್ರಕೃತಿಗೆ ಹಾನಿಯಾಗದಂತೆ ವಾಸ್ತು ಶಾಸ್ತ್ರದಲ್ಲಿ ತಿಳಿಸಿದ ಆಯದಂತೆ ಗೃಹನಿರ್ಮಾಣ ಮಾಡಬೇಕಾಗಿದೆ. ಆಗಲೇ ಮನೆಯಲ್ಲಿ ಸುಖ ಶಾಂತಿ, ಯಶಸ್ಸು, ಕೀರ್ತಿ ನೆಮ್ಮದಿ ಪಡೆಯಲು ಸಾಧ್ಯ.
ಇ - ಪೂಜಾ
"ದೇವತೋದ್ದೇಶ ದ್ರವ್ಯತ್ಯಾಗೋ ಯಜ್ಞಃ" ದೇವರನ್ನು ಉದ್ದೇಶಿಸಿಕೊಂಡು ಸಮರ್ಪಣಾ ಭಾವದಿಂದ ವಸ್ತುತ್ಯಾಗ ಮಾಡುವುದೇ ಪೂಜಾದಿ ಯಾಜ್ಞೀಕ ಕರ್ಮಗಳು. ಭಯ, ಶೋಕ, ಕಷ್ಟ ಮತ್ತು ದುಃಖವನ್ನು ನಿವಾರಿಸಿಕೊಂಡು ಪುಣ್ಯ ಸಂಪಾದನೆಯಿಂದಾಗಿ ತ್ರಿಕರಣ ಪೂರ್ವಕವಾಗಿ   ನೆಮ್ಮದಿ ಮತ್ತು ಹಿತವಾದ ಸುಖದ ಜೀವನವನ್ನು ಸಾಗಿಸಲು ದೇವತಾರಾಧನೆಯಿಂದ ಮಾತ್ರ ಸಾಧ್ಯ. ಅದನ್ನು ನಮ್ಮಲ್ಲಿ ಪೂಜಾಕರ್ಮವನ್ನರಿತ ವೇದಜ್ಞರಿಂದ ಎಲ್ಲಾ ಪೂಜಾ- ಹವನಾದಿಗಳನ್ನು ಮಾಡಿಕೊಡಲಾಗುವುದು.
ವೇದಾಧ್ಯಯನ
ವಿಸ್ಕೃತವೂ, ಗಮನವೂ, ತಾತ್ವಿಕವೂ ಆದ ಭಾರತೀಯ ವಿಚಾರ ತಿಳಿಸುವ ಸಂಸ್ಕೃತ ಪಾಠ, ಭಗವದ್ಗೀತೆ, ಭಾಗವತ ಗ್ರಂಥಗಳ ಬಗೆಗಿನ ಸುಧಾಪಾನ ಮಾಡಿಸಲು ನುರಿತ ಶಾಸ್ತ್ರಜ್ಞರಿಂದ ತಿಳಿಸಿ ಕೊಡುವ ಸಣ್ಣದಾದ ಪ್ರಯತ್ನವೇ ವೈದಿಕ ಶಿಕ್ಷಣ.
ಜಾತಕ ಮೇಳಾಮೇಳಿ
ಜೀವನದಲ್ಲಿ ಎಲ್ಲರೂ ತಮ್ಮ ಗುಣಗಳಿಗೆ ಹೊಂದಾಣಿಕೆಯಾಗುವ ಬಾಳ ಸಂಗಾತಿಯನ್ನು ಪಡೆಯಲು ಬಯಸುತ್ತಾರೆ. ನಿಮಗೆ ಯಾವ ರೀತಿಯ ಬಾಳ ಸಂಗಾತಿ ಸಿಕ್ಕಿದರೆ ನಿಮ್ಮ ಜೀವನವು ಸುಖಮಯವಾಗಿರುತ್ತದೆ ಎಂಬುದನ್ನು ನಿಮ್ಮ ರಾಶಿ ನಕ್ಷತ್ರದ ಆಧಾರದ ಮೇಲೆ ತಿಳಿಯಬಹುದು.ನಿಮ್ಮ ಬಾಳ ಸಂಗಾತಿಯ ಬಗ್ಗೆ ತಿಳಿದುಕೊಳ್ಳಲು ಈ ಕೂಡಲೇ ನಮ್ಮ ಅನುಭವಿ ಜ್ಯೋತಿಷಿಗಳನ್ನು ಸಂಪರ್ಕಿಸಿ.
ಭಾರತೀಯ ವೈದಿಕ ಪರಂಪರೆಯು ಅತ್ಯಂತ ಪ್ರಾಚೀನವೂ ಶ್ರೀಮಂತವು ಆಗಿದೆ ಭಾರತದ ಪ್ರಾಚೀನ ವಿದ್ಯಾ ಸಮುದ್ರದಲ್ಲಿ ಅಗ್ರಮಾನ್ಯವಾದ ರತ್ನವೆಂದರೆ ಅದು ಜ್ಯೋತಿಷ್ಯ. ಈ ಜ್ಯೋತಿಷವು ಹೋರಾ ಸಂಹಿತಾ ಹಾಗೂ ಗಣಿತ ಎಂಬ ಮೂರು ಸ್ಕಂದಗಳಿಂದ ಕೂಡಿದೆ. ಮನುಷ್ಯನ ಜನ್ಮಕಾಲಿನ ಆಕಾಶ ಕಾಯಗಳ ಸ್ಥಿತಿಗಳನ್ನು ಅನುಸರಿಸಿ ವಯಕ್ತಿಕ ಪೂರ್ವಾರ್ಜಿತ ಕರ್ಮಫಲಗಳ ಫಲ ರೂಪವಾದ ಭೂತ ಭವಿಷ್ಯ ವರ್ತಮಾನಗಳ ಚಿಂತನೆಯನ್ನು ಜಾತಕ ವಿಮರ್ಶೆ ಎಂದು ಹೇಳಬಹುದಾಗಿದೆ.
ಜ್ಯೋತಿಷ್ಯಾಸ್ತ್ರವು ಬಹು ಪುರಾತನವಾಗಿದ್ದು ಮನುಷ್ಯನ ಜೀವನದಲ್ಲಿನ ಆಗುಹೋಗುಗಳನ್ನು ಮನುಷ್ಯನ ಜನ್ಮ ಸಮಯದ ಆಧಾರದ ಮೇಲೆ ಊಹಿಸಲು ಸಹಾಯ ಮಾಡುತ್ತದೆ.  ಜೀವನ ಸುಖಮಯವಾಗಿ ಸುಗಮವಾಗಿ ಸಾಗಲು ಜ್ಯೋತಿಷ್ಯಾಸ್ತ್ರವು ಸಹಕಾರಿಯಾಗಿದೆ.
ನಮ್ಮ ಅನುಭವಿ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಿಗೆ ಜ್ಯೋತಿಷ್ಯಾಸ್ತ್ರದ ಆಧಾರದ ಮೇಲೆ ಸುಲಭ ಪರಿಹಾರಗಳನ್ನು ತಿಳಿಸಿ ಕೊಡುತ್ತಾರೆ. ಹಾಗೂ ನಿಮಗೆ ಉಂಟಾಗುತ್ತಿರುವ ಸಂಶಯಗಳನ್ನು ಪರಿಹರಿಸಿ ಮುಂದೆ ಯಾವ ಮಾರ್ಗದಲ್ಲಿ ನಡೆದರೆ ಶ್ರೇಯಸ್ಸಾಗುವುದು ಎಂಬುದನ್ನು ತಿಳಿಸುತ್ತಾರೆ.ಸಲಹೆಗಳನ್ನು ಪಡೆಯಲು ಈಗಲೇ ಸಂಪರ್ಕಿಸಿ.
ಸ ಕಾಲೇ ಕೃತಂ ಕರ್ಮ ಫಲತಿ ಎನ್ನುವಂತೆ ಸಮಯದ ಗುಣವು ಕರ್ಮದ ಮೇಲೆ ತನ್ನ ಸಂಪೂರ್ಣವಾದ ಪರಿಣಾಮವನ್ನು ಹೊಂದಿರುತ್ತದೆ.. ಯಾವುದೇ ಕಾರ್ಯವಾದರೂ ತನ್ನ ಪೂರ್ಣತೆಯನ್ನು ಹೊಂದಿ ಯಶಸ್ಸನ್ನು ತಲುಪಲು ಕರ್ಮ ಆರಂಭ ಕಾಲವು ಅತ್ಯಂತ ಪ್ರಾಮುಖ್ಯತೆಯನ್ನು ಹೊಂದುತ್ತದೆ. ಅಂತಹ ಉತ್ತಮ ಕಾಲವನ್ನು ಭಾರತೀಯ ಪರಂಪರೆಯಲ್ಲಿ ಶುಭ ಮಹೂರ್ತ ಎಂದು ಹೇಳಿದ್ದಾರೆ.
ಮುಹೂರ್ತವು ಭಾರತೀಯ ಜ್ಯೋತಿಷ್ಯಾಸ್ತ್ರದ ಒಂದು ಅಂಗವಾಗಿದೆ. ಮುಹೂರ್ತವು ಯಾವ ಕೆಲಸಗಳನ್ನು ಯಾವ ಸಮಯದಲ್ಲಿ ಮಾಡಬೇಕೆಂಬುದನ್ನು ಸೂಚಿಸುತ್ತದೆ. ನಿಮ್ಮ ಜೀವನದ ಶ್ರೇಯಸ್ಸಿಗಾಗಿ ಮತ್ತು ನೀವು ಮಾಡುವ ಕೆಲಸದಲ್ಲಿ ಯಶಸ್ಸು ನಿಮ್ಮದಾಗಬೇಕಾದರೆ ನೀವು ಉತ್ತಮ ಸಮಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಈ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಹೂರ್ತವು ಸಹಕಾರಿಯಾಗಿರುತ್ತದೆ.ನಮ್ಮಲ್ಲಿರುವ ಅನುಭವಿ ಜ್ಯೋತಿಷ್ಯರು ನಿಮ್ಮ ಜೀವನದ ಯಶಸ್ಸಿಗಾಗಿ ನಿಮಗೆ ಹೊಂದಾಣಿಕೆಯಾಗುವ ಮುಹೂರ್ತಗಳನ್ನು ನಿಮ್ಮ ಜನ್ಮ ಸಮಯದ ರಾಶಿ,ನಕ್ಷತ್ರದ ಆಧಾರದ ಮೇಲೆ ತಿಳಿಸಿ ಕೊಡುತ್ತಾರೆ. ಮುಹೂರ್ತವನ್ನು ಪಡೆಯಲು ಕೂಡಲೇ ಸಂಪರ್ಕಿಸಿ.
Our experienced astrologers specialise in Muhurta selection and are dedicated to helping you achieve your goals with precision and foresight.
Agara Shri Jagannatha Swamy Temple Agara Flyover, Agara Village, 1st Sector, HSR Layout, Bengaluru, Karnataka - 560102
@ Bharatheeyam 2024